ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

ಕರ್ನಾಟಕ ಸರ್ಕಾರ

Back
ಸೇವೆಗಳು

ನೋಂದಣಿ

ಕ್ರಮ ಸಂಖ್ಯೆ ದಾಖಲೆಗಳು ವೀಕ್ಷಿಸಿ
1 ಮಾಲೀಕರು /ಗುತ್ತಿಗೆದಾರರು/CRADAI/BAI/KSCA ಕಟ್ಟಡ ಅಥವಾ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿರುವ ಬಗ್ಗೆ ಕಾರ್ಮಿಕನಿಗೆ ನೀಡುವ FORM No-V(A) ಡೌನ್ಲೋಡ್
2 ಕಾರ್ಮಿಕನು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ನೋಂದಾಯಿತ ಕಾರ್ಮಿಕ ಸಂಘದವರು ನೀಡುವ FORM No-V(B) ಡೌನ್ಲೋಡ್
3 ಕಾರ್ಮಿಕನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಕಾರ್ಮಿಕ ಅಧಿಕಾರಿಗಳು/ಹಿರಿಯ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ನಿರೀಕ್ಷಕರು ನೀಡುವ FORM No-V(C) ಡೌನ್ಲೋಡ್
4 ಉದ್ಯೋಗ ಪ್ರಮಾಣ ಪತ್ರ (ಗ್ರಾಮ ಪಂಚಾಯಿತಿಯಲ್ಲಿ ಕಟ್ಟಡ ಅಥವಾ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡಿರುವ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿ ನೀಡಿವ) FORM No-V(D) ಡೌನ್ಲೋಡ್

 

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ  ಕಲ್ಯಾಣ ಮಂಡಳಿಯಲ್ಲಿ ಫಲಾನುಭವಿಯಾಗಿ ನೋಂದಾಯಿಸುವ ಅರ್ಜಿ- 

ಅರ್ಹತೆ: ಮಾರ್ಗಸೂಚಿಗಳನ್ನುಅನುಸರಿಸುವುದು
ಪೂರಕ ದಾಖಲಾತಿಗಳು:
1. ಉದ್ಯೋಗದೃಡೀಕರಣಪತ್ರ (ನಮೂನೆ V(A) / V(B) / V(C)/ V(D))
2. ಆಧಾರ್  ಕಾರ್ಡ್  (ಸ್ವಯಂ ದೃಡೀಕೃತ ಪ್ರತಿ)
4. ರೇಷನ್ಕಾರ್ಡ್(non Mandatory)
5. ವಯಸ್ಸಿನದೃಡೀಕರಣಪತ್ರ (ಯಾವುದಾದರೊಂದು ಆಧಾರ್  ಕಾರ್ಡ್ ,ಗುರುತಿನಚೀಟಿ)


 • ಅರ್ಜಿ ಶುಲ್ಕ : Rs.0
  ಸೇವಾ ಶುಲ್ಕ (ಆನ್ ಲೈನ್ ಅರ್ಜಿ ಸಲ್ಲಿಕೆಗೆ ಸೇವಾ ಶುಲ್ಕವಿಲ್ಲ): Rs. 0
  ವಿತರಣಾ ಸಮಯ (ದಿನಗಳು): 45 Days

 • ಅನ್ವಯಿಸುವ ವಿಧಾನ:
  1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
  2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ ಮತ್ತು ಅನುಮೋದನೆ

   

   

   

ನಿಯಮ 20A : ನೋಂದಾಯಿತ ನಿರ್ಮಾಣ ಕಾರ್ಮಿಕನ ಹಾಲಿ ನೋಂದಣಿಯನ್ನು ಮುಂದುವರಿಸುವ ಸಲುವಾಗಿ ಪಡೆಯುವ ಉದ್ಯೋಗ ಪ್ರಮಾಣ ಪತ್ರ:-

ಅಧಿನಿಯಮ 14 ರ ಉದ್ದೇಶವನ್ನು ಪೂರೈಸಲು ಸಲುವಾಗಿ ನೋಂದಾಯಿತ ಫಲಾನುಭವಿಯು ಉದ್ಯೋಗ ಪ್ರಮಾಣ ಪತ್ರ V(A)/ V(B)/ V(C)/ V(D) ಜೊತೆಗೆ ವರ್ಷದಲ್ಲಿ 90 ದಿನಗಳ ಹೆಚ್ಚಿಗೆ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿದ ಸಾಕ್ಷಿಗಾಗಿ ನಿಯೋಜಕರಿಂದ ಪಡೆದ ವೇತನ ಚೀಟಿ ಅಥವಾ ಹಾಜರಾತಿ ಪ್ರತಿಯನ್ನು ಲಗತ್ತಿಸಿ ಹಾಲಿ ನೋಂದಣಿಯನ್ನು ಪುನಶ್ಚೇತನಗೊಳಿಸಬೇಕು.

 

 

ಪಿಂಚಣಿ ಸೌಲಭ್ಯ

 

ನಿಯಮ 39:-ಪಿಂಚಣಿ ಸೌಲಭ್ಯಕ್ಕೆ ಅರ್ಹತೆ, ಪಿಂಚಣಿ ಮಂಜೂರಾತಿ ವಿಧಾನ ಇತ್ಯಾದಿ.

ಅರ್ಹತೆ:-

 • ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕ ಫಲಾನುಭವಿಯು 60 ವರ್ಷ ವಯೋಮಿತಿ ಪೂರ್ಣಗೊಳಿಸಿರಬೇಕು.
 • ನೋಂದಾಯಿತ ಕಟ್ಟಡ ಕಾರ್ಮಿಕ  60 ವರ್ಷ ವಯಸ್ಸು ಪೂರ್ಣಗೊಳ್ಳುವ ಪೂರ್ವದಲ್ಲಿ ಕನಿಷ್ಠ 03 ವರ್ಷಗಳು ನಿರಂತರವಾಗಿ ಮಂಡಳಿಯ ಫಲಾನುಭವಿಯಾಗಿ ಮುಂದುವರೆದಿರಬೇಕು.

ಪಿಂಚಣಿಗೆ ಅರ್ಹರಾದ ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯ KBOCWWB  ತಂತ್ರಾಂಶದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕನು ತನ್ನ ಮಂಡಳಿಯ ಮೂಲ ಗುರುತಿನ ಚೀಟಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಮಂಡಳಿಯು ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಪಿಂಚಣಿ ಕೋರಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ನಂತರ, ಫಲಾನುಭವಿಗೆ ಪಿಂಚಣಿ ಮಂಜೂರಾತಿ ಆದೇಶದ ಜೊತೆಗೆ ವಿದ್ಯುನ್ಮಾನಿಕೃತ ವಿಶಿಷ್ಷ ಪಿಂಚಣಿ ಗುರುತಿನ ಚೀಟಿಯನ್ನು ನೀಡಬೇಕು.

 • ಫಲಾನುಭವಿಯು ಸಲ್ಲಿಸಿದ ಪಿಂಚಣಿ ಅರ್ಜಿಯ ಪರಿಶೀಲನಾ ಸಂದರ್ಭದಲ್ಲಿ ಅರ್ಜಿಯು ಅನರ್ಹ ಎಂದು ಕಂಡು ಬಂದಲ್ಲಿ, ಅರ್ಜಿಯನ್ನು ತಿರಸ್ಕರಿಸಲಾಗುವುದು.
 • ಪಿಂಚಣಿದಾರ ಮರಣ ಹೊಂದಿದಾಗ, ಅವರ ಕಾನೂನುಬದ್ದ ಅವಲಂಬಿತರು ಅಥವಾ ಉತ್ತರಾಧಿಕಾರಿಗಳು ಪಿಂಚಣಿದಾರರ ಮರಣ ಪ್ರಮಾಣ ಪತ್ರವನ್ನು ಸಲ್ಲಿಸಿ ಬ್ಯಾಂಕ್ ಖಾತೆಯನ್ನು ಮುಚ್ಚಲು ಮಂಡಳಿಗೆ ತಿಳಿಸಬೇಕು.
 • ಪಿಂಚಣಿಯ ಮೊತ್ತವು ಮಾಸಿಕ ರೂ 3000/-ಗಳನ್ನು (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ: 08-08-2022 ರಂತೆ ) ಮೀರತಕ್ಕದಲ್ಲ, ಮತ್ತು ಫಲಾನುಭವಿಯು ಸರ್ಕಾರದ ಇತರೆ ಯೋಜನೆಯಡಿ ಇದೇ ತರಹದ ಯಾವುದೇ ಸೌಲಭ್ಯವನ್ನು ಪಡೆದಿರಬಾರದು)
 • ನೋಂದಾಯಿತ ಫಲಾನುಭವಿಯು ಪಿಂಚಣಿಯನ್ನು ಮುಂದುವರೆಸಲು ಪ್ರತಿ ವರ್ಷವೂ ಜೀವಿತ ಪ್ರಮಾಣ ಪತ್ರ ನಮೂನೆ XIV –A (living certificate form XIV –A) ಅನ್ನು ಮಂಡಳಿಯ ತಂತ್ರಾಂಶದಲ್ಲಿ ಮಂಜೂರಾತಿ ಅಧಿಕಾರಿಗೆ ಸಲ್ಲಿಸಬೇಕು.

ಅರ್ಜಿಯೊಂದಿಗೆ ಸಲ್ಲಿಸುವ ಪೂರಕ ದಾಖಲಾತಿಗಳು:

 • ಮಂಡಳಿಯಿಂದ ನೀಡಲಾದ  ಮೂಲ  ಗುರುತಿನ  ಚೀಟಿ
 • ಉದ್ಯೋಗದ ದೃಢೀಕರಣ ಪತ್ರ 
 • ಜೀವಿತ ಪ್ರಮಾಣ ಪತ್ರ 
 • ರೇಷನ್ ಕಾರ್ಡ್ ಪ್ರತಿ
 • ಫಲಾನುಭವಿಯ ಬ್ಯಾಂಕ್ ಪಾಸ್ ಪುಸ್ತಕದ ಛಾಯಾಪ್ರತಿ
 • ಪಾಸ್ ಪೋರ್ಟ್ ಫೋಟೋ

ಅನ್ವಯಿಸುವ ವಿಧಾನ:

1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ  
3. ಸಹಾಯಕ ಕಾರ್ಮಿಕ ಆಯುಕ್ತರಿಂದ  ಅನುಮೋದನೆ

 

ಕುಟುಂಬ ಪಿಂಚಣಿ ಸೌಲಭ್ಯ ನಿಯಮ 39(ಎ (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 106 ಎಲ್ ಇಟಿ 2019 ಬೆಂಗಳೂರು ದಿನಾಂಕ: 01-10-2019 ರಂತೆ  ಸೇರ್ಪಡೆ)

ಕುಟುಂಬ ಪಿಂಚಣಿ ಸೌಲಭ್ಯಕ್ಕೆ ಅರ್ಹತೆ, ಪಿಂಚಣಿ ಮಂಜೂರಾತಿ ವಿಧಾನ ಇತ್ಯಾದಿ.

 1. ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿ ರವರು ಕುಟುಂಬ ಪಿಂಚಣಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
 2. ಉಪನಿಯಮ (1) ರಂತೆ ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿಯು ನಮೂನೆ-12(ಬಿ) ರಲ್ಲಿ ಮಂಡಳಿಗೆ ಅರ್ಜಿ ಸಲ್ಲಿಸಬೇಕು
 3. ಉಪನಿಯಮ (2)ದಂತೆ ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿಯುಅರ್ಜಿಯೊಂದಿಗೆ ಈ ಕೆಳಕಂಡ ದಾಖಲಾತಿಗಳನ್ನು ಸಲ್ಲಿಸುವುದು.         

 

 • ಪಿಂಚಣಿ ಪಡೆಯುತ್ತಿದ್ದ ಮೃತ ನೋಂದಾಯಿತ ಕಾರ್ಮಿಕನ ಮರಣ ಪ್ರಮಾಣ ಪತ್ರ
 • ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿ ಎಂದು ದೃಢೀಕರಿಸಲುಕಂದಾಯ ಇಲಾಖೆಯಿಂದ ಪಡೆದ ಪ್ರಮಾಣ ಪತ್ರ
 • ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್
 • ಅರ್ಜಿದಾರರ ಇತ್ತೀಚಿನ ಒಂದು ಭಾವಚಿತ್ರ
 1. ಮಂಡಳಿಯು ಮೃತ ಪಿಂಚಣಿದಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪತಿ/ಪತ್ನಿ ಪಿಂಚಣಿ ಕೋರಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ನಂತರ, ಅರ್ಜಿದಾರರಿಗೆ ಕುಟುಂಬ ಪಿಂಚಣಿ ಮಂಜೂರಾತಿ ಆದೇಶದ ಜೊತೆಗೆ ವಿದ್ಯುನ್ಮಾನಿಕೃತ ವಿಶಿಷ್ಷ ಪಿಂಚಣಿ ಗುರುತಿನ ಚೀಟಿ ಮತ್ತು ಸಂಖ್ಯೆಯನ್ನು ನೀಡಬೇಕು.
 2. ಕುಟುಂಬ ಪಿಂಚಣಿಯು ಈ ಹಿಂದೆ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರು ಪಡೆಯುತ್ತಿದ್ದ ಪಿಂಚಣಿಯ ಅರ್ಧದಷ್ಟು ಮೊತ್ತವನ್ನು ಮೀರತಕ್ಕದಲ್ಲ ಮತ್ತುಕುಟುಂಬ ಪಿಂಚಣಿಯು ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮೆ ಮಾಡತಕ್ಕದ್ದು.
 • ಅರ್ಜಿದಾರರು ಸಲ್ಲಿಸಿದ ಪಿಂಚಣಿ ಅರ್ಜಿಯ ಪರಿಶೀಲನಾ ಸಂದರ್ಭದಲ್ಲಿ ಅರ್ಜಿಯು ಅನರ್ಹ ಎಂದು ಕಂಡು ಬಂದಲ್ಲಿ, ಅರ್ಜಿಯನ್ನು ತಿರಸ್ಕರಿಸುವ ಮುನ್ನ ಮಂಡಳಿಯು ಅರ್ಜಿದಾರರಿಗೆ ಪೂರ್ಣ ಮಾಹಿತಿ ಒದಗಿಸಲು ಕಾಲಾವಕಾಶವನ್ನು ನೀಡಬೇಕು.
 • ಕುಟುಂಬ ಪಿಂಚಣಿದಾರ ಮರಣ ಹೊಂದಿದಾಗ, ಅವರ ಕಾನೂನುಬದ್ದ ಅವಲಂಬಿತರು ಅಥವಾ ಉತ್ತರಾಧಿಕಾರಿಗಳು ಕುಟುಂಬ ಪಿಂಚಣಿದಾರರ ಮರಣ ಪ್ರಮಾಣ ಪತ್ರವನ್ನು ಮಂಡಳಿಗೆ ಸಲ್ಲಿಸುವುದು ಬ್ಯಾಂಕ್ ಖಾತೆಯನ್ನು ಮುಚ್ಚಲು ಮಂಡಳಿಗೆ ತಿಳಿಸಬೇಕು.
 • ಕುಟುಂಬ ಪಿಂಚಣಿದಾರರು ಮಂಜೂರಾತಿ ಪ್ರಾಧಿಕಾರಕ್ಕೆ ಪ್ರತಿ ವರ್ಷ ಜೀವಿತ ಪ್ರಮಾಣ ಪತ್ರ ನಮೂನೆ XII –A (living certificate form XII –A) ಕುಟುಂಬ ಪಿಂಚಣಿ ಖಾತೆ ಹೊಂದಿರುವ ಬ್ಯಾಂಕ್ ಮ್ಯಾನೇಜರ್ / ಕಂದಾಯ ಇಲಾಖೆ ಅಧಿಕಾರಿಯವರಿಂದ ಸಲ್ಲಿಸುವುದು.
 • ಕುಟುಂಬ ಪಿಂಚಣಿಯ ಮಂಜೂರಾತಿ ಪ್ರಾಧಿಕಾರವು ಪಿಂಚಣಿದಾರರ ದಾಖಲೆಗಳನ್ನು ನಮೂನೆ XIII ರಲ್ಲಿ ನಿರ್ವಹಿಸಬೇಕು.

 

ಅಪಘಾತ ಪರಿಹಾರ

ಅಪಘಾತ ಪರಿಹಾರ ನಿಯಮ 47:-

ಅಪಘಾತ ಎಂದರೆ ಯಾವುದೇ ಅಪರಾಧ ಉದ್ದೇಶವಿಲ್ಲದೆ ಮತ್ತು ಅನಿರೀಕ್ಷಿತವಾಗಿ ನಡೆಯುವ ಘಟನೆಯಾಗಿದ್ದು, ಇದರಿಂದ ವ್ಯಕ್ತಿಗೆ ಸಂಭವಿಸಬಹುದಾದ ಮರಣ ಅಥವಾ ಶಾಶ್ವತ / ಭಾಗಶಃ ದುರ್ಬಲತೆ.

ಅಪಘಾತ ಪರಿಹಾರ ಪಡೆಯಲು ಬೇಕಾದ ಅರ್ಹತೆ:

ನೋಂದಾಯಿತ ಕಟ್ಟಡ ಕಾರ್ಮಿಕನಿಗೆ ಕೆಲಸ ಮಾಡುವ ಸಮಯದಲ್ಲಿ ಅಪಘಾತವಾದಾಗ, ಅವನಿಗೆ / ಅವಳಿಗೆ ಕಾರ್ಮಿಕರ ನಷ್ಠ ಪರಿಹಾರ ಕಾಯ್ದೆ, 1923 ರ ಪ್ರಾವಧಾನಗಳಡಿ ಸಂಸ್ಥೆಯ ನಿಯೋಜಕನು ಅಪಘಾತ ಪರಿಹಾರವನ್ನು ನೀಡಬೇಕಾಗುತ್ತದೆ. ಜೊತೆಗೆ ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 106 ಎಲ್ ಇಟಿ 2019 ಬೆಂಗಳೂರು ದಿನಾಂಕ: 01-10-2019 ರಂತೆ ಮಂಡಳಿಯಿಂದ 2-ಲಕ್ಷ ರೂಗಳ ಪರಿಹಾರ ಸಹಾಯಧನ ನೀಡಲಾಗುತ್ತಿದೆ. ಆದರೆ, ಒಂದು ವೇಳೆ ಆತನ ಅವನ/ಅವಳ ಉದ್ಯೋಗ ಸ್ಥಳದಿಂದ ಹೊರಗೆ ಅಪಘಾತ ಸಂಭವಿಸಿದರೆ, ಆ ಫಲಾನುಭವಿಗೆ ಮಂಡಳಿಯಿಂದ ಈ ನಿಯಮದಡಿಯಲ್ಲಿ ಅಪಘಾತ ಪರಿಹಾರ ಧನವನ್ನು ನೀಡಬೇಕಾಗುತ್ತದೆ.

ಆದರೆ, ಈ ಕೆಳಗಿನ ಪ್ರಕರಣಗಳಲ್ಲಿ ಅಪಘಾತ ಪರಿಹಾರ ಸಹಾಯಧನ ನೀಡಲಾಗುವುದಿಲ್ಲ

 • ಸಹಜ ಮರಣ
 • ಆತ್ಮಹತ್ಯೆ/ ಉದ್ದೇಶ ಪೂರ್ವಕ ವೈಯಕ್ತಿಕ ಹಾನಿಮಾಡಿಕೊಳ್ಳುವುದು
 • ಮಾದಕ ದ್ರವ್ಯ ಮತ್ತು ಔಷಧಿಗಳಿಂದ ಸಂಭವಿಸುವ ಮರಣ
 • ಕ್ರಿಮಿನಲ್ ಉದ್ದೇಶದಿಂದ ಕಾನೂನಿನ ಉಲ್ಲಂಘನೆ ಮಾಡಿ ಸಂಭವಿಸುವ ಸಾವು
 • ಗರ್ಭಿಣಿ ಸಾವು, ಮಗುವಿನ ಜನನ ಸಮಯದ ಸಾವು, ಗರ್ಭಪಾತದ ಸಾವು ಮತ್ತು ಇದಕ್ಕೆ ಸಂಭವಿಸಿದ ಸಾವು
 • ಚಿಕಿತ್ಸಕ ಚಿಕಿತ್ಸೆಗಳು ಅಥವಾ ಮಧ್ಯಸ್ಥಿಕೆಗಳು
 • ಲೈಂಗಿಕವಾಗಿ ಹರಡುವ ರೋಗಗಳು
 • ಎಚ್ಐವಿ ಅಥವಾ ಸಂಬಂಧಿತ ರೋಗಗಳು
 • ದೈಹಿಕವಾಗಿ ದಂಢಿಸಿಕೊಳ್ಳುವ ಅಪರಾಧಿತ ಪ್ರಯತ್ನದ ಸಾವು 

ಕ್ಲೈಮ್:-

ಉಪ-ನಿಯಮ (2) ಅಡಿಯಲ್ಲಿ ಅಪಘಾತದ ಪರಿಹಾರಕ್ಕಾಗಿ ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕ ಅಥವಾ ಅವನ/ಅವಳ ಮೊದಲ ನಾಮ ನಿರ್ದೇಶಿತರು ಸರ್ಕಾರದ ಆಸ್ಪತ್ರೆಯ ವೈದ್ಯರು ಅಥವಾ ಮಾನ್ಯತೆ ಪಡೆದ ನೋಂದಾಯಿತ ವೈದ್ಯರಿಂದ ದುರ್ಬಲತೆಯ ಶೇಕಡವಾರು ಪ್ರಮಾಣಕ್ಕೆ ಅನುಗುಣವಾಗಿ ಪ್ರಮಾಣ ಪತ್ರವನ್ನು ಮತ್ತು ಅಪಘಾತವಾಗಿರುವ ಕುರಿತು ನಿಯೋಜಕನು ನೀಡುವ ನಮೂನೆ XXI-A ಜೊತೆಗೆ ಪ್ರಥಮ ವರ್ತಮಾನ ವರದಿ, ಮರಣೋತ್ತರ ಪರೀಕ್ಷಾ ವರದಿಗಳನ್ನು ನಮೂನೆ XXI ರಲ್ಲಿ ಅಡಕಗೊಳಿಸಿ ಮಂಡಳಿಯ ಅಧಿಕೃತ ಅಧಿಕಾರಿಗೆ ಸಲ್ಲಿಸಬೇಕಾಗುತ್ತದೆ.

ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ನಿರ್ಮಾಣ ಕಾರ್ಮಿಕನು/ಳು ಸಲ್ಲಿಸುವ ದಾಖಲೆಗಳು ನಿಯಮದ ಪ್ರಾವಧಾನಗಳನ್ನು ಪೂರೈಸಿದೆ ಎಂದು ಗಮನಕ್ಕೆ ಬಂದಾಗ ಅದನ್ನು ಪುರಸ್ಕರಿಸಬೇಕು. ಒಂದು ವೇಳೆ ಅಪೂರ್ಣ ದಾಖಲೆಗಳನ್ನು ಒದಗಿಸಿ, ನಿಯಮಗಳ ಉಲ್ಲಂಘನೆ ಮಾಡಿದ್ದಲ್ಲಿ, ಅರ್ಜಿಯನ್ನು ತಿರಸ್ಕರಿಸಬೇಕಾಗುತ್ತದೆ.

ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ಫಲಾನುಭವಿಯ ಮೊದಲ ನಾಮ ನಿರ್ದೇಶಿತನಿಗೆ ರೂ.5 ಲಕ್ಷಗಳ ಪರಿಹಾರವನ್ನು ನೀಡಲಾಗುವುದು, ಇದರಲ್ಲಿ ಶೇ.50 ರಷ್ಟು ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ ಮತ್ತು ಶೇ.50 ರಷ್ಟು ಹಣವನ್ನು ಫಲಾನುಭವಿಯ ನಾಮ ನಿರ್ದೇಶಿತರ ಬ್ಯಾಂಕ್ ಖಾತೆಗೆ (DBT) ಮೂಲಕ ಜಮೆ ಮಾಡುವುದು. ಫಲಾನುಭವಿಯು ದುರ್ಬಲತೆಗೆ ಒಳಗಾದಾಗ ಕಾರ್ಮಿಕ ನಷ್ಠ ಪರಿಹಾರ ಕಾಯ್ದೆ1923ರ ಪ್ರಾವಧಾನಗಳಡಿ ವ್ಯಾಖ್ಯಾನಿಸಿರುವಂತೆ ದುರ್ಬಲತೆಯ ಪ್ರಮಾಣಕ್ಕೆ ಅನುಗುಣವಾಗಿ ಶಾಶ್ವತ ಪೂರ್ಣ ದುರ್ಬಲತೆಗೆ ರೂ.2 ಲಕ್ಷಗಳ ಪರಿಹಾರ ಹಾಗೂ ಭಾಗಶಃ ಶಾಶ್ವತ ದುರ್ಬಲತೆಗೆ ರೂ.1 ಲಕ್ಷಗಳ ಸಹಾಯಧನವನ್ನು ಫಲಾನುಭವಿಗೆ ನೀಡುವುದು.

• ಮೇಲಿನ ಪರಿಹಾರ ಸಹಾಯಧನವನ್ನು ಪಡೆಯಲು ಮಂಡಳಿಯ ತಂತ್ರಾಂಶದಿಂದ  ಅರ್ಜಿಯನ್ನು ಸಲ್ಲಿಸ ಬೇಕಾಗಿರುತ್ತದೆ.
• ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
• ಮರಣ ಪ್ರಮಾಣಪತ್ರ (ಅಪಘಾತದಿಂದ ಮರಣ ಹೊಂದಿದ್ದಲ್ಲಿ)
• ಮರಣೊತ್ತಾರಾ ಪರೀಕ್ಷೆ ವರದಿ ನೀಡತಕ್ಕದ್ದು (ಅಪಘಾತದಿಂದ ಮರಣ ಹೊಂದಿದ್ದಲ್ಲಿ)
• ಎಫ್ಐಆರ್ ಪ್ರತಿ ನೀಡತಕ್ಕದ್ದು
• ನಮೂನೆ 21 -ಎ (ಈ ದಾಖಲಾತಿಯನ್ನು ಉದ್ಯೋಗದಾತರಿಂದ ಭರ್ತಿ ಮಾಡಿ ಮತ್ತು ಅಪ್ಲೋಡ್ ಮಾಡಬೇಕು) ನೀಡತಕ್ಕದ್ದು

• ಫಲಾನುಭವಿ ಮರಣ ಹೊಂದಿದ ಸಂದರ್ಭದಲ್ಲಿ ಫಲಾನುಭವಿಯ ನಾಮನಿರ್ದೇಶಿತರ (ನಾಮಿನಿ) ಬ್ಯಾಂಕ್ ಪಾಸ್ ಪುಸ್ತಕದ ಛಾಯಾಪ್ರತಿ     ನೀಡತಕ್ಕದ್ದು
• ಉದ್ಯೋಗದ ದೃಢೀಕರಣ ಪತ್ರ ನೀಡತಕ್ಕದ್ದು
• ವೈದ್ಯಕೀಯ ವರದಿ ನೀಡತಕ್ಕದ್ದು(ಸಂಪೂರ್ಣ /ಭಾಗಶಃ ದುರ್ಬಲತೆಯ ಸಂದರ್ಭದಲ್ಲಿ)
• ನಾಮನಿರ್ದೇಶಿತರ (ನಾಮಿನಿ) ಭಾವಚಿತ್ರವಿರುವ ಗುರುತು ಚೀಟಿಯ (ಯಾವುದಾದರೊಂದು) ಛಾಯಾಪ್ರತಿ ನೀಡತಕ್ಕದ್ದು
• ನಾಮನಿರ್ದೇಶಿತರ ನಮೂನೆ ಮತ್ತು ವಂತಿಗೆ ಪ್ರಮಾಣ ಪತ್ರವನ್ನು ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಸಲ್ಲಿಸುವುದು
• ಅರ್ಜಿ ಪ್ರಕ್ರಿಯೆ ಮತ್ತು ಪರಿಶೀಲನೆ (ಅಗತ್ಯವಿದಲ್ಲಿ) ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ನಡೆಸಲಾಗುವುದು
• ಸಹಾಯಕ ಕಾರ್ಮಿಕ ಆಯುಕ್ತರಿಂದ ಪರಿಶೀಲನೆ ಮತ್ತು ಅನುಮೋದನೆ
• ಫಲಾನುಭವಿ ಅಪಘಾತವಾದ ದಿನದಿಂದ ಒಂದು ವರ್ಷದೊಳಗೆ ಅರ್ಜಿಯನ್ನು ಸಲ್ಲಿವುದು

 

ಅನ್ವಯಿಸುವ ವಿಧಾನ:

1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ  
3. ಸಹಾಯಕ ಕಾರ್ಮಿಕ ಆಯುಕ್ತರಿಂದ  ಅನುಮೋದನೆ

 

ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ)

 

ವೈದ್ಯಕೀಯ ಸಹಾಯಧನ ನಿಯಮ 46:  (ಕಾರ್ಮಿಕ ಆರೋಗ್ಯ ಭಾಗ್ಯ)

ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಗಳು ನೋಂದಾಯಿತ ಫಲಾನುಭವಿ ಮತ್ತು ಅವನ ಅವಲಂಬಿತರು ರಾಜ್ಯ ಸರ್ಕಾರದ ಯಾವುದೇ ವಿಮೆ ಯೋಜನೆ ಅಡಿಯಲ್ಲಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಅಥವಾ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರ ಷಡ್ಯೂಲ್-1 ರಲ್ಲಿ ನಮೂದಿಸಿರುವ ಆಸ್ವತ್ರೆಗಳಲ್ಲಿ ದಾಖಲಾದಾಗ ವೈದ್ಯಕೀಯ ಸಹಾಯಧನವನ್ನು ನೀಡಬೇಕಾಗುತ್ತದೆ. ಕನಿಷ್ಠ 48 ಗಂಟೆಗಳವರೆಗೆ ಸತತವಾಗಿ ಆಸ್ಪತ್ರೆಯಲ್ಲಿ ದಾಖಲಾದಾಗ, ವೈದ್ಯಕೀಯ ಸಹಾಯಧನವನ್ನು ನೀಡಬೇಕಾಗಿರುತ್ತದೆ. ಪ್ರತಿ ದಿನಕ್ಕೆ 300 ರೂ ನಂತೆ ಗರಿಷ್ಠ ರೂ.20,000/- (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ: 08-08-2022 ರಂತೆ ) ಮಿತಿಗೆ ಒಳಪಟ್ಟು  ಸಹಾಯಧನ ಮಂಜೂರು ಮಾಡಬೇಕಾಗುತ್ತದೆ.

 

ಪೂರಕ ದಾಖಲಾತಿಗಳು:

 • ಮಂಡಳಿ ನೀಡಿರುವ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್ (ದೃಢೀಕೃತ)
 • ಉದ್ಯೋಗ ದೃಡೀಕರಣ ಪತ್ರ
 • ಬ್ಯಾಂಕ್ ಖಾತೆಯ ಪುರಾವೆ
 • ಆಸ್ಪತ್ರೆಗೆ ದಾಖಲಾದ ಮತ್ತು ಬಿಡುಗಡೆಯಾದ ದಿನಾಂಕ ಹಾಗೂ ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಬಿಲ್ಲುಗಳ ವಿವರ
 • ಫಲಾನುಭವಿಯು/ಅವಲಂಬಿತ ಸರ್ಕಾರಿ/ಸರ್ಕಾರದಿಂದ ಮಾನ್ಯತೆ ಪಡೆದ (ಶೆಡ್ಯೂಲ್ 1ಗೆ ಸೇರಿದ ) ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ ಎರಡು ದಿನ ಒಳರೋಗಿಯಾಗಿ ದಾಖಲೆಯಾಗಿರುವ ಬಗ್ಗೆ ವೈದ್ಯಕೀಯ ದಾಖಲೆಯನ್ನು ಸಲ್ಲಿಸಬೇಕು
 • ನಮೂನೆ 22 ಎ
 • ಆಸ್ಪತ್ರೆಯಿಂದ  ಬಿಡುಗಡೆಯಾದ ದಿನಾಂಕದಿಂದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು  
 • ಅರ್ಜಿದಾರರು  ಮಂಡಳಿಯ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸುವುದು


ಅನ್ವಯಿಸುವ ವಿಧಾನ:

1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ
3. ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ

ತಾಯಿ ಮಗು ಸಹಾಯ ಹಸ್ತ

 

ನಿಯಮ 43- A ನೋಂದಾಯಿತ ಮಹಿಳಾ ಕಾರ್ಮಿಕಳ ಮಗುವಿನ ಪೌಷ್ಠಿಕಾಂಶದ ಪೂರೈಕೆಗಾಗಿ ಹಾಗು ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ನೀಡುವ ಸಹಾಯ ಧನ (ತಾಯಿ ಮಗು ಸಹಾಯ ಹಸ್ತ)

 • ನೋಂದಾಯಿತ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆಯ ಸಮಯದಿಂದ ಮೂರು ವರ್ಷಗಳ ಅವಧಿಯವರೆಗೆ ಮಗುವಿನ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಠಿಕಾಂಶದ ಪೂರೈಕೆಗಾಗಿ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾಳೆ.
 • ಒಟ್ಟು ಮೊತ್ತವು ರೂ.6000/- ಗಳು ಆಗಿರುತ್ತದೆ. (ಪ್ರತಿ ತಿಂಗಳು 500/- ರೂ.ಗಳಂತೆ ಅಂತೆ ಮಂಜೂರಾತಿ ಅಧಿಕಾರಿಯು ನೋಂದಾಯಿತ ಮಹಿಳಾ ಫಲಾನುಭವಿಗೆ ಮಂಜೂರು ಮಾಡಬೇಕು).
 • ನೋಂದಾಯಿತ ಮಹಿಳಾ ಕಾರ್ಮಿಕರು ಎರಡು ಬಾರಿ ಮಾತ್ರ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ (ಮೊದಲ ಎರಡು ಮಕ್ಕಳ ಜನನಕ್ಕಾಗಿ ಮಾತ್ರ).
 • ಅರ್ಜಿಯು ಜನನ ಮತ್ತು ಮರಣ ನೋಂದಾಣಾ ಅಧಿಕಾರಿಯಿಂದ ಪಡೆದ ಜನನ ಪ್ರಮಾಣ ಪತ್ರವನ್ನು ಒಳಗೊಂಡಿರಬೇಕು.
 • ಈ ಸೌಲಭ್ಯವನ್ನು ಪಡೆಯಲು ಅರ್ಹರಾದ ಮಹಿಳಾ ಫಲಾನುಭವಿಯು ಮಂಡಳಿಯ  ತಂತ್ರಾಂಶದಿಂದ ಅರ್ಜಿಯನ್ನು ಸಲ್ಲಿಸಬೇಕು.

ಪೂರಕ ದಾಖಲಾತಿಗಳು:

 • ಮಂಡಳಿ ನೀಡಿರುವ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್ (ದೃಢೀಕೃತ )
 • ಮಕ್ಕಳ ಛಾಯಾಚಿತ್ರ
 • ಉದ್ಯೋಗ ದೃಡೀಕರಣ ಪತ್ರ
 • ಬ್ಯಾಂಕ್ ಖಾತೆ ಪುರಾವೆ
 • ಡಿಸ್ಚಾರ್ಜ್ ಸಾರಾಂಶ
 • ಮಗುವಿನ ಜನನ ಪ್ರಮಾಣಪತ್ರ
 • ಮಗುವಿನ ಜನನದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು
 • ಮೂರು ವರ್ಷದವರೆಗೂ ಪ್ರತಿ ವರ್ಷ ಅರ್ಜಿಯನ್ನು ಸಲ್ಲಿಸತಕ್ಕದ್ದು
 • ಮಗುವಿನ ಜೀವಿತ ಕುರಿತು ಪ್ರತಿ (ಎರಡು ಹಾಗೂ ಮೂರನೇ ವರ್ಷ) ವರ್ಷ ಅಫಿಡೆವಿಟ್ ಸಲ್ಲಿಸತಕ್ಕದ್ದು

ಅನ್ವಯಿಸುವ ವಿಧಾನ:

1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ
3. ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ

ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್)

 

ನಿಯಮ 43: ನೋಂದಾಯಿತ ನಿರ್ಮಾಣ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆಗೆ ನೀಡುವ ಸಹಾಯ ಧನ

 • ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ಮಹಿಳಾ ಕಾರ್ಮಿಕರಿಂದ ಅರ್ಜಿಯನ್ನು ಪಡೆದು ಆಕೆಯ ಗಂಡು/ಹೆಣ್ಣು ಮಗುವಿನ ಜನನಕ್ಕೆ ರೂ.50,000/- (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ: 08-08-2022 ರಂತೆ ) ಮೊದಲ ಎರಡು ಹೆರಿಗೆಗೆ ಸಹಾಯಧನವನ್ನು ಮಂಜೂರು ಮಾಡಲಾಗುವುದು. (ಮಗುವಿನ ಹೆರಿಗೆ ಆದ ಕುರಿತು ದಾಖಲೆಗಳನ್ನು ಸಲ್ಲಿಸುವುದು)
 • ಈ ಕೆಳಕಂಡ ಷರತ್ತುಗಳನ್ನು ಪೂರೈಸಿದಾಗ ಮಾತ್ರ ಸಹಾಯ ಧನವನ್ನು ಮಂಜೂರು ಮಾಡಬೇಕಾಗುತ್ತದೆ.
 • ನೋಂದಾಯಿತ ಮಹಿಳಾ ಕಾರ್ಮಿಕರು ಮೊದಲ ಎರಡು ಜೀವಂತ ಮಕ್ಕಳಿಗೆ  ಮಾತ್ರ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ (ಎರಡನೇ ಹಕ್ಕು ಸಾಧನೆ ಸಹಾಯ ಧನ ಅರ್ಜಿಯು ಎರಡನೇ ಮಗುವಿನ ಹೆರಿಗೆ ಎಂದು ಹೇಳುವ ಅಫೀಡೆವಿಟ್ ಅನ್ನು ಒಳಗೊಂಡಿರಬೇಕು).
 • ಒಂದು ವೇಳೆ ಈಗಾಗಲೇ ನೋಂದಾಯಿತ ಮಹಿಳಾ ಕಾರ್ಮಿಕರಿಗೆ ಎರಡು ಮಕ್ಕಳಿದ್ದರೆ, ಅವಳು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗುವುದಿಲ್ಲ.
 • ಜನನ ಮತ್ತು ಮರಣದ ನೋಂದಾಣಾ ಅಧಿಕಾರಿಯಿಂದ ಜನನದ ಪ್ರಮಾಣ ಪತ್ರವನ್ನು ಪಡೆಯಬೇಕು. ಅಥವಾ ಸರ್ಕಾರಿ ಆಸ್ಪತ್ರೆ, ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಅಂಗೀಕೃತ ಆಸ್ಪತ್ರೆಗಳಲ್ಲಿ ದಾಖಲಾಗಿ ಆ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಪೂರಕ ದಾಖಲಾತಿಗಳು:

 • ಮಂಡಳಿ ನೀಡಿರುವ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್
 • ಎರಡನೇ ಮಗುವಿನ ಹೆರಿಗೆ ಎಂದು ಅಫಿಡವಿಟ್ ಸಲ್ಲಿಸುವುದು
 • ಬ್ಯಾಂಕ್ ಖಾತೆ ಪುರಾವೆ
 • ಮಕ್ಕಳ ಛಾಯಾಚಿತ್ರ
 • ಉದ್ಯೋಗ ದೃಡೀಕರಣ ಪತ್ರ
 • ಡಿಸ್ಚಾರ್ಜ್ ಸಾರಾಂಶ
 • ಮಗುವಿನ ಜನನ ಪ್ರಮಾಣಪತ್ರ
 • ಮಗುವಿನ ಜನನದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು

ಅನ್ವಯಿಸುವ ವಿಧಾನ:

1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ
3. ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ

ಮದುವೆ ಸಹಾಯ ಧನ (ಗೃಹ ಲಕ್ಷ್ಮೀ ಬಾಂಡ್)

 

ನಿಯಮ 49: ನೋಂದಾಯಿತ ಕಟ್ಟಡ ಕಾರ್ಮಿಕರ ಮೊದಲ ಮದುವೆ ಅಥವಾ ಅವನ /ಅವಳ ಅವಲಂಭಿತರ ಮದುವೆಗೆ ನೀಡುವ ಸಹಾಯ ಧನ-

1. ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ಕಾರ್ಮಿಕ ರಿಂದ ಅರ್ಜಿಯನ್ನು ಸ್ವೀಕರಿಸಿ ಫಲಾನುಭವಿಯ ಮೊದಲನೆ ಮದುವೆಗೆ ಅಥವಾ ಅವನ / ಅವಳ ಎರಡು ಅವಲಂಭಿತ ಮಕ್ಕಳಿಗೆ ಮದುವೆಯ ವೆಚ್ಚವನ್ನು ಭರಿಸಲು ಸಹಾಯಧನವಾಗಿ ರೂ.60,000/- ಗಳನ್ನೂ (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ: 08-08-2022 ರಂತೆ ) ಮಂಜೂರು ಮಾಡಬೇಕು.

2. ಈ ಕೆಳಕಂಡ ಷರತ್ತುಗಳನ್ನು ಪೂರೈಸಿದಾಗ ಮಾತ್ರ ಸಹಾಯ ಧನವನ್ನು ಮಂಜೂರು ಮಾಡಬೇಕಾಗುತ್ತದೆ.

 • ನೋಂದಾಯಿತ ಕಟ್ಟಡ ಕಾರ್ಮಿಕನು ಮದುವೆಯ ಸಹಾಯ ಧನ ಪಡೆಯಲು ಮದುವೆಯಾದ ದಿನಾಂಕದಿಂದ ನೋಂದಣಿಯಾದ ದಿನಾಂಕದವರೆಗೆ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
 • ನೋಂದಾಯಿತ ಕಟ್ಟಡ ಕಾರ್ಮಿಕನ ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. (ನೋಂದಾಯಿತ ಕಟ್ಟಡ ಕಾರ್ಮಿಕನ ಕುಟುಂಬದಲ್ಲಿ ಇರುವ ನೋಂದಾಯಿತ ನಿರ್ಮಾಣ ಕಾರ್ಮಿಕನ ಸದಸ್ಯರನ್ನು ಲೆಕ್ಕಿಸದೆ ಒಂದು ನಿರ್ದಿಷ್ಠವಾದ ಮದುವೆಗೆ ಒಂದೇ ಸಹಾಯ ಧನವಾಗಿ ಹಕ್ಕು ಸಾಧಿಸಬೇಕಾಗಿರುತ್ತದೆ).
 • ನೋಂದಾಯಿತ ಕಟ್ಟಡ ಕಾರ್ಮಿಕನ ಮಗ ಅಥವಾ ಮಗಳು ಮದುವೆ ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.
 • ವಿವಾಹ ನೋಂದಣಾಧಿಕಾರಿಯಿಂದ ಪಡೆದ ವಿವಾಹ ನೋಂದಣಾ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಪೂರಕ ದಾಖಲಾತಿಗಳು:

 • ಫಲಾನುಭವಿಯೆಂದು ನೊಂದಣೆಯಾಗಿ ಒಂದು ವರ್ಷದ ನಂತರ ಅರ್ಜಿಯನ್ನು ಸಲ್ಲಿಸುವುದು
 • ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
 • ಉದ್ಯೋಗ ದೃಡೀಕರಣ ಪತ್ರ
 • ಬ್ಯಾಂಕ್ ಖಾತೆ ವಿವರಗಳು
 • ವಿವಾಹ ನೋಂದಣಾಧಿಕಾರಿಗಳಿಂದ ಪಡೆದ ವಿವಾಹ ನೋಂದಣಾ ಪತ್ರ
 • ಮದುವೆಯ ಆಮಂತ್ರಣ ಪತ್ರ
 • ಮದುವೆ ಕರ್ನಾಟಕ ರಾಜ್ಯದ ಹೊರಗೆ ಜರುಗಿದ್ದಲ್ಲಿ ಅಫಿಡೆವಿಟ್ ಸಲ್ಲಿಸುವುದು
 • ರೇಷನ್ ಕಾರ್ಡ್
 • ಮದುವೆಯಾಗಿ ಆರು ತಿಂಗಳೊಳಗೆ ಅರ್ಜಿಯನ್ನುಸಲ್ಲಿಸುವುದು

ಅನ್ವಯಿಸುವ ವಿಧಾನ:

1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ
3. ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ

ಪ್ರಮುಖ ವೈಧ್ಯಕೀಯ ವೆಚ್ಚ ಸಹಾಯ ಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ)

 

ನಿಯಮ 48 : ನೋಂದಾಯಿತ ಕಟ್ಟಡ ಕಾರ್ಮಿಕರ ಹಾಗು ಅವನ / ಅವಳ ಅವಲಂಭಿತರ ಪ್ರಮುಖ ಖಾಯಿಲೆಗಳ ವೆಚ್ಚಕ್ಕಾಗಿ ನೀಡುವ 1.ಪ್ರಮುಖ ಖಾಯಿಲೆ ಎಂದರೆ:- ಹೃದ್ರೋಗ, ಕೋವಿಡ್-19, ಕಿಡ್ನಿ ಜೋಡಣೆ, ಕ್ಯಾನ್ಸ್ ರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ,ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸ್ ರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇಎನ್.ಟಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ (ಮಂಡಳಿಯಿಂದ ಪರಿಗಣಿಸಲ್ಪಡುವ ಇತರೆ ಪ್ರಮುಖ ಖಾಯಿಲೆಗಳು ಮತ್ತು ಔದ್ಯೋಗಿಕ ಖಾಯಿಲೆಗಳು)

2.ಅರ್ಹತೆ; ಉಪನಿಯಮ 1 ರಲ್ಲಿ ನಮೂದಿಸಿರುವ ಖಾಯಿಲೆಗಳನ್ನು ಹೊಂದಿರುವ ನೋಂದಾಯಿತ ಕಟ್ಟಡ ಕಾರ್ಮಿಕ ಮತ್ತು ಅವನ / ಅವಳ ಅವಲಂಬಿತರು ವೆಚ್ಚದ ವೈಧ್ಯಕೀಯ ವೆಚ್ಚದ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಹಕ್ಕು ಸಾಧನೆ (claim):-

 • ನೋಂದಾಯಿತ ನಿರ್ಮಾಣ ಕಾರ್ಮಿಕ ಮತ್ತು ಅವನ / ಅವಳ ಅವಲಂಭಿತರು ಚಿಕಿತ್ಸಾ ಸಮಯದಲ್ಲಿ ಮೃತರಾದರೆ ವೈಧ್ಯಕೀಯ ವೆಚ್ಚದ ಸಹಾಯ ಧನವನ್ನು ಉಪ ನಿಯಮ 1 ರಂತೆ ಪಡೆಯಲು ಅರ್ಹರಾಗಿದ್ದು, . ಆದರೆ, ಉಪನಿಯಮ 1 ರಂತೆ ವೈಧ್ಯಕೀಯ ವೆಚ್ಚದ ಸಹಾಯಧನಕ್ಕೆ ಅರ್ಹರಾಗಿರುವ ಫಲಾನುಭವಿಯು ಮಂಡಳಿಗೆ ಕರ್ನಾಟಕ ಸರ್ಕಾರಿ ನೌಕರರ (ವೈಧ್ಯಕೀಯ ಹಾಜರಾತಿ) ನಿಯಮಗಳು, 1963 ರ ಷಡ್ಯೂಲ್-1 ರಲ್ಲಿ ನಮೂದಿಸಿರುವ ಅಥವಾ ರಾಜ್ಯ ಸರ್ಕಾರದ ಯಾವುದೇ ವಿಮೆ ಯೋಜನೆ ಅಡಿಯಲ್ಲಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ದಾಖಲಾಗಿರುವುದಕ್ಕೆ ಸಹಾಯಕ ಸರ್ಜನ್ ಹುದ್ದೆಗಿಂತ ಕಡಿಮೆ ಇಲ್ಲದ ವೈಧ್ಯರಿಂದ ವೈಧ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
 • ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ನಿರ್ಮಾಣ ಕಾರ್ಮಿಕರು  ಸಲ್ಲಿಸಿರುವ ವೈಧ್ಯಕೀಯ ವೆಚ್ಚದ ಸಹಾಯಧನ ಅರ್ಜಿ ಮತ್ತು ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಿ ಸರಿಯಿದೆ ಎಂದು ಮನವರಿಕೆಯಾದರೆ ಅರ್ಜಿಯನ್ನು ಪುರಸ್ಕರಿಸಬೇಕು. ಇಲ್ಲವಾದಲ್ಲಿ, ಅರ್ಜಿದಾರರಿಗೆ ಸಾಕಷ್ಟು ಕಾಲವಕಾಶವನ್ನು ನೀಡಿ ಅರ್ಜಿಯನ್ನು ತಿರಸ್ಕರಿಸಬೇಕು. ಮಂಡಳಿಯ ತೀರ್ಮಾನ ಅಂತಿಮವಾಗಿರುತ್ತದೆ.

3.ವೈಧ್ಯಕೀಯ ವೆಚ್ಚದ ಸಹಾಯಧನದ ಮೊತ್ತ ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು  ಕೇಂದ್ರ ಸರ್ಕಾರದ ಆರೋಗ್ಯ ಸೇವೆ ಅಡಿ ಪ್ರತಿ ಸೇವೆಗೆ ಸೂಚಿಸಿರುವ ದರಗಳಿಗೆ ಅನುಗುಣವಾಗಿ ಗರಿಷ್ಠ ರೂ.2 ಲಕ್ಷಗಳವರೆಗೂ ಮಂಜೂರು ಮಾಡುವುದು.

ಪೂರಕ ದಾಖಲಾತಿಗಳು:

 • ಮಂಡಳಿ ನೀಡಿರುವ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್ (ದೃಢೀಕೃತ)
 • ಉದ್ಯೋಗ ದೃಡೀಕರಣ ಪತ್ರ
 • ಬ್ಯಾಂಕ್ ಖಾತೆಯ ಪುರಾವೆ
 • ಆಸ್ಪತ್ರೆಗೆ ದಾಖಲಾದ ಮತ್ತು ಬಿಡುಗಡೆಯಾದ ದಿನಾಂಕ ಹಾಗೂ ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಬಿಲ್ಲುಗಳ ವಿವರ
 • ಪೂರಕ ದಾಖಲಾತಿಗಳು: ಫಲಾನುಭವಿಯು/ಅವಲಂಬಿತ ಸರ್ಕಾರಿ/ಸರ್ಕಾರದಿಂದ ಮಾನ್ಯತೆ ಪಡೆದ (ಶೆಡ್ಯೂಲ್ 1ಗೆ ಸೇರಿದ ) ಖಾಸಗಿ ಆಸ್ಪತ್ರೆಗಳಲ್ಲಿ ದಾಖಲೆಯಾಗಿರುವ ಬಗ್ಗೆ
 • ವೈದ್ಯಕೀಯ ದಾಖಲೆಯನ್ನು ಸಲ್ಲಿಸಬೇಕು.
 • ನಮೂನೆ 22-ಎ
 • ಆಸ್ಪತ್ರೆಯಿಂದ  ಬಿಡುಗಡೆಯಾದ ದಿನಾಂಕದಿಂದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು

ಅನ್ವಯಿಸುವ ವಿಧಾನ:

1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ
3. ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ

 

 

ಶೈಕ್ಷಣಿಕ ಧನಸಹಾಯ

 

ನಿಯಮ 45: ನೋಂದಾಯಿತ ಕಟ್ಟಡ ಕಾರ್ಮಿಕನ ಮಗ ಅಥವಾ ಮಗಳ ಶಿಕ್ಷಣದ ನೆರವು.

 • ನೋಂದಾಯಿತ ಕಟ್ಟಡ ಕಾರ್ಮಿಕರ ಅರ್ಹ ಇಬ್ಬರು ಮಕ್ಕಳಿಗೆ ಸಹಾಯಧನ ನೀಡಲಾಗುವುದು.
 • ಕರ್ನಾಟಕ ರಾಜ್ಯದಲ್ಲಿ ಭೌತಿಕವಾಗಿ ಆರಂಭವಾಗಿರುವ ಹಾಗೂ ಸರ್ಕಾರದಿಂದ ನೋಂದಾಯಿತ ಶಾಲಾ ಕಾಲೇಜುಗಳಲ್ಲಿ ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಫಲಾನುಭವಿಗಳ 02 ಮಕ್ಕಳಿಗೆ ಮಾತ್ರ ಶೈಕ್ಷಣಿಕ ಸಹಾಯಧನವನ್ನು ನೀಡಬಹುದಾಗಿರುತ್ತದೆ.
 • ದೂರ ಶಿಕ್ಷಣ, ಆನ್ ಲೈನ್ ಶಿಕ್ಷಣ, ಹೋಂ ಸ್ಟಡಿ, ಇತ್ಯಾದಿ ವ್ಯಾಸಂಗದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಪಡೆಯಲು ಅವಕಾಶ ಇರುವುದಿಲ್ಲ 

 

ದುರ್ಬಲತೆ ಪಿಂಚಣಿ

 

ನಿಯಮ 40:-ದುರ್ಬಲತೆ ಪಿಂಚಣಿ ಸೌಲಭ್ಯ, ಅರ್ಹತೆ, ವಿಧಾನ ಮತ್ತು ಮಂಜೂರಾತಿ ಇತ್ಯಾದಿ.

 1. ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ನಿರ್ಮಾಣ ಕಾರ್ಮಿಕನು/ಳು ಕೆಲಸದ ಸಮಯದಲ್ಲಾದ ಅಪಘಾತದಿಂದ ಅಥವಾ ಯಾವುದಾದರೂ ಖಾಯಿಲೆಯಿಂದ ಭಾಗಶಃ ದುರ್ಬಲತೆಗೆ ಒಳಗಾದಾಗ ಅವನಿಗೆ/ಅವಳಿಗೆ ಸರ್ಕಾರದ ಅಧಿಸೂಚನೆಯಂತೆ ರೂ.2000/-ಗಳನ್ನು ದುರ್ಬಲತೆ ಪಿಂಚಣಿಯನ್ನಾಗಿ ಮಂಜೂರು ಮಾಡಲಾಗುತ್ತದೆ. ರೂ.2 ಲಕ್ಷದ ಮೊತ್ತವನ್ನು ಮೀರದೇ, ಅವನ / ಅವಳ ಶೇಡಾವಾರು ದುರ್ಬಲತೆಗೆ ಅನುಗುಣವಾಗಿ ಈ ಕೆಳಕಂಡ ಷರತ್ತು ನಿಭಂದನೆಗಳಿಗೆ ಒಳಪಟ್ಟು ದುರ್ಬಲರಿಗೆ ಪರಿಹಾರ ಸಹಾಯಧನ ಮಂಜೂರು ಮಾಡಬಹುದಾಗಿರುತ್ತದೆ.
 2. ನೋಂದಾಯಿತ ಫಲಾನುಭವಿಯು ನಿಯಮ 47ರಲ್ಲಿ ಪರಿಹಾರ ಸಹಾಯ ಧನ ಪಡೆದಿದ್ದಲ್ಲಿ, ಈ ನಿಯಮದಡಿ ಪರಿಹಾರ ಸಹಾಯಧನ ಪಡೆಯಲು ಸಾಧ್ಯವಿಲ್ಲ.ಅಂಗವಿಕಲತೆ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಫಲಾನುಭವಿಯು ಗುರುತಿನ ಚೀಟಿಯನ್ನು ಪಡೆದಿರಬೇಕಾಗುತ್ತದೆ
 3. ನೋಂದಾಯಿತ ಫಲಾನುಭವಿ ದುರ್ಬಲತೆಯ ಪಿಂಚಣಿಗಾಗಿ ಮಂಡಳಿಯ  ತಂತ್ರಾಂಶದಿಂದ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
 4. ನೋಂದಾಯಿತ ಫಲಾನುಭವಿಯ ದುರ್ಬಲತೆಯು ಕೆಲಸದ ಸ್ಥಳದಲ್ಲಿ ಆದ ಅಪಘಾತ ಅಥವಾ ಯಾವುದಾದರೂ ಖಾಯಿಲೆಯಿಂದ ಉಂಟಾಗಿದ್ದು, ಅದರ ಶೇಡಾವಾರು ದುರ್ಬಲತೆಗೆ ಅನುಗುಣವಾಗಿ ಅಂಗವಿಕಲತೆ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯವರು ದುರ್ಬಲತೆಯ ಲೆಕ್ಕಾಚಾರ ಈ ಕೆಳಕಂಡ ಸೂತ್ರದ ಮುಖೇನ ನೀಡಲಾಗುವುದೆಂದು ಮಂಡಳಿಯ ಅಥವಾ ಅಧೀಕೃತ ಮಂಜೂರಾತಿ ಅಧಿಕಾರಿ ತೀರ್ಮಾನಿಸುತ್ತಾರೆ.
 5. Formula ರೂ.2,00,000/- ಗರಿಷ್ಠ ಮೊತ್ತ X ಅಂಗವಿಕಲತೆ ಹಾಗು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಘೋಷಣೆ ಮಾಡಿದ ಶೇಡಾವಾರು ದುರ್ಬಲತೆ = ಪರಿಹಾರ ಸಹಾಯಧನ
 6. ದುರ್ಬಲತೆ ಪಿಂಚಣಿಯನ್ನು ನೋಂದಾಯಿತ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
 7. ನೋಂದಾಯಿತ ಫಲಾನುಭವಿಯು ದುರ್ಬಲತೆ ಪಿಂಚಣಿಯನ್ನು ಮುಂದುವರೆಸಲು ಪ್ರತಿ ವರ್ಷವು ಜೀವಿತ ಪ್ರಮಾಣ ಪತ್ರ ನಮೂನೆ XIV –A (living certificate form XIV –A) ಅನ್ನು ಮಂಡಳಿಯ ತಂತ್ರಾಂಶದಲ್ಲಿ ಮಂಜೂರಾತಿ ಅಧಿಕಾರಿಗೆ ಸಲ್ಲಿಸಬೇಕು.
 8. ದುರ್ಬಲತೆ ಪಿಂಚಣಿ ಪಡೆಯಲು ಫಲಾನುಭವಿ ಅರ್ಹನಲ್ಲ ಎಂದು ಕಂಡು ಬಂದಾಗ ಅವನಿಗೆ ನಿಯಮಾನುಸಾರ ಪರಿಶೀಲಿಸಿ ಅರ್ಜಿಯನ್ನು ತಿರಸ್ಕರಿಸಬೇಕಾಗುತ್ತದೆ.
  ಒಂದು ವೇಳೆ ದುರ್ಬಲತೆ ಪಿಂಚಣಿದಾರರು ಮರಣಿಸಿದರೆ ಅವರ ಕಾನೂನುಬದ್ದ ಅವಲಂಭಿತರು ಅಥವಾ ಉತ್ತರಾಧಿಕಾರಿಗಳು  ಮರಣ ಪ್ರಮಾಣ ಪತ್ರವನ್ನು ಮಂಡಳಿಗೆ ಸಲ್ಲಿಸುವುದು.

ಪೂರಕ ದಾಖಲಾತಿಗಳು:

 • ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
 • ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಗುರುತು ಚೀಟಿಯ ಛಾಯಾಪ್ರತಿ ನೀಡತಕ್ಕದ್ದು
 • ಫಲಾನುಭವಿಯ ಬ್ಯಾಂಕ್ ಪಾಸ್ ಪುಸ್ತಕದ ಛಾಯಾಪ್ರತಿ ನೀಡತಕ್ಕದ್ದು
 • ಪ್ರತಿವರ್ಷ ಜೀವಿತ ಪ್ರಮಾಣ ಪತ್ರ ನೀಡತಕ್ಕದ್ದು
 • ರೇಷನ್ ಕಾರ್ಡ್  ನೀಡತಕ್ಕದ್ದು
 • ಉದ್ಯೋಗದ ದೃಢೀಕರಣ ಪತ್ರ ನೀಡತಕ್ಕದ್ದು
 • ವೈದ್ಯಕೀಯ ವರದಿ
 • ವಿಕಲಚೇತನ  ಹಾಗೂ ಹಿರಿಯ  ನಾಗರೀಕರ ಸಬಲೀಕರಣ ಇಲಾಖೆಯಿಂದ ಪಡೆದ, ದೃಢೀಕರಿಸಲ್ಪಟ್ಟ ಗುರುತಿನ ಚೀಟಿಯನ್ನು ಲಗತ್ತಿಸತಕ್ಕದ್ದು
 • ದುರ್ಬಲತೆಗೊಳಗಾದ ಫಲಾನುಭವಿಯ ಭಾವಚಿತ್ರ ಲಗತ್ತಿಸತಕ್ಕದ್ದು
 • ಫಲಾನುಭವಿಯು ಸಕ್ಷಮ ಪ್ರಾಧಿಕಾರದಿಂದ ದುರ್ಬಲತೆಯ ಗುರುತಿನ ಚೀಟಿಯನ್ನು ಪಡೆದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು
 • ಫಲಾನುಭವಿ ಮರಣ ಹೊಂದಿದ ಪಕ್ಷದಲ್ಲಿ, ನಾಮ ನಿರ್ದೇಶಿತರು ಮರಣ ಪ್ರಮಾಣ ಪತ್ರವನ್ನು ಮಂಡಳಿಗೆ ನೀಡತಕ್ಕದ್ದು

ಅನ್ವಯಿಸುವ ವಿಧಾನ:

1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ  
3. ಸಹಾಯಕ ಕಾರ್ಮಿಕ ಆಯುಕ್ತರಿಂದ  ಅನುಮೋದನೆ

 

ಅಂತ್ಯಕ್ರಿಯೆ ವೆಚ್ಚ ಮತ್ತು ಅನುಗ್ರಹ ರಾಶಿ

 

ನಿಯಮ 44:-ನೋಂದಾಯಿತ ಕಟ್ಟಡ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ಹಾಗು ಅನುಗ್ರಹ ರಾಶಿ ನೀಡುವ ಸಹಾಯಧನ.

ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ಮರಣಕ್ಕೀಡಾದಾಗ ನೋಂದಾಯಿತ ಕಟ್ಟಡ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ರೂ.4000/-ಗಳನ್ನು ಹಾಗೂ ಮರಣದಿಂದ ಕುಟುಂಬದಲ್ಲಿ ಆಗುವ ಆರ್ಥಿಕ ಸಂಕಷ್ಟವನ್ನು ಎದುರಿಸಲು ಅನುಗ್ರಹ ರಾಶಿಯೆಂದು ರೂ.71,000/- ಗಳನ್ನು (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ: 08-08-2022 ರಂತೆ ) ಶಾಸನಬದ್ಧ ನಾಮನಿರ್ದೇಶಿತನಿಗೆ ಮಂಜೂರು ಮಾಡುವುದು. ನೋಂದಾಯಿತ ಕಟ್ಟಡ ಕಾರ್ಮಿಕನ ನಾಮನಿರ್ದೇಶಿತನು ಮರಣ ಪ್ರಮಾಣಪತ್ರ ಹಾಗೂ ಮೂಲ ಗುರುತಿನ ಚೀಟಿಯೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

 

ಪೂರಕ ದಾಖಲಾತಿಗಳು:

 • ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
 • ಫಲಾನುಭವಿ ಮರಣ ಹೊಂದಿದ ಸಂದರ್ಭದಲ್ಲಿ ಫಲಾನುಭವಿಯ ನಾಮನಿರ್ದೇಶಿತರ (ನಾಮಿನಿ) ಬ್ಯಾಂಕ್ ಪಾಸ್ ಪುಸ್ತಕದ ಛಾಯಾಪ್ರತಿ ನೀಡತಕ್ಕದ್ದು
 • ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಮರಣ ಪ್ರಮಾಣಪತ್ರ ನೀಡತಕ್ಕದ್ದು
 • ರೇಷನ್ ಕಾರ್ಡ್ ನೀಡತಕ್ಕದ್ದು
 • ಆಧಾರ್ ಕಾರ್ಡ್ ನೀಡತಕ್ಕದ್ದು
 • ಉದ್ಯೋಗದ ದೃಢೀಕರಣ ಪತ್ರ ನೀಡತಕ್ಕದ್ದು
 • ನಾಮನಿರ್ದೇಶಿತರ (ನಾಮಿನಿ) ಭಾವಚಿತ್ರವಿರುವ ಗುರುತು ಚೀಟಿಯ (ಯಾವುದಾದರೊಂದು) ಛಾಯಾಪ್ರತಿ ನೀಡತಕ್ಕದ್ದು
 • ಫಲಾನುಭವಿ ಮರಣವಾದ ದಿನದಿಂದ ಒಂದು ವರ್ಷದೊಳಗೆ ಅರ್ಜಿಯನ್ನು ಸಲ್ಲಿವುದು

ಅನ್ವಯಿಸುವ ವಿಧಾನ:

1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ  
3. ಸಹಾಯಕ ಕಾರ್ಮಿಕ ಆಯುಕ್ತರಿಂದ  ಅನುಮೋದನೆ

ಬಿ ಎಂ ಟಿ ಸಿ ಬಸ್ ಪಾಸ್ ಸೌಲಭ್ಯ

 

ನಿಯಮ 49- E:-ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಲು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನೀಡುವ ರಿಯಾಯಿತಿ ಬಸ್ ಪಾಸ್ 

1.ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಖಾಯಂ ಆಗಿ ವಾಸವಾಗಿರುವ ನೋಂದಾಯಿತ ನಿರ್ಮಾಣ ಕಾರ್ಮಿಕನು ಬೆಂಗಳೂರಿನಲ್ಲಿ ಕೆಲಸದ ಸ್ಥಳಕ್ಕೆ ಪ್ರಯಾಣಿಸಲು ಬಿಎಂಟಿಸಿ ಬಸ್ ಪಾಸ್ ಪಡೆಯಲು ಈ ನಿಯಮದಡಿ ಅರ್ಹನಾಗಿರುತ್ತಾನೆ/ಳೆ.

ಪೂರಕ ದಾಖಲಾತಿಗಳು:

    1.  ನೋಂದಾಯಿತ ಫಲಾನುಭವಿಯ ಗುರುತಿನ ಚೀಟಿ
    2.  ಆಧಾರ್ ಕಾರ್ಡ್
    3. ಎರಡು ಸ್ಟಾಂಪ್ ಅಳತೆಯ ಭಾವಚಿತ್ರ

ಹಕ್ಕುಸಾಧನಾ ಅರ್ಜಿಗಳನ್ನು ಸಲ್ಲಿಸಲು ಇರುವ ಕಾಲ ಮಿತಿ

 

ನಿಯಮ – 49 – C ಹಕ್ಕುಸಾಧನಾ ಅರ್ಜಿಗಳನ್ನು ಸಲ್ಲಿಸಲು ಇರುವ ಕಾಲ ಮಿತಿ

ಈ ಕೆಳಕಂಡಂತೆ ವಿವಿಧ ಹಕ್ಕುಸಾಧನಾ (Claim Applications) ಅರ್ಜಿಗಳನ್ನು ಸಲ್ಲಿಸಲು ಕಾಲ ಮಿತಿಯನ್ನು ಸೂಚಿಸಿದೆ.

ನಿಯಮ39 - ಪಿಂಚಣಿ ಸೌಲಭ್ಯ, ಅರ್ಹತೆ, ಪಿಂಚಣಿಯ ವಿಧಾನ ಮತ್ತು ಮಂಜೂರಾತಿ ಇತ್ಯಾದಿ

ಫಲಾನುಭವಿ 60 ವರ್ಷ ದಾಟಿದ 06 ತಿಂಗಳ ಒಳಗೆ ಅರ್ಜಿ ಸಲ್ಲಿಸುವುದು. (ಫಲಾನುಭವಿ 60 ವರ್ಷ ವಯಸ್ಸು ದಾಟುವ 03 ತಿಂಗಳ ಮುನ್ನ ಅರ್ಜಿಯನ್ನು ಸಲ್ಲಿಸಬೇಕು).

ನಿಯಮ40 – ದುರ್ಬಲತೆ ಪಿಂಚಣಿ ಸೌಲಭ್ಯ, ಅರ್ಹತೆ ಪಿಂಚಣಿಯ ವಿಧಾನ ಮತ್ತು ಮಂಜೂರಾತಿ ಇತ್ಯಾದಿ.

ಅಂಗವಿಕಲತೆ ಹಾಗು ಹಿರಿಯ ನಾಗರೀಕರ ಸಬಲೀಕರಣ ಪ್ರಾಧಿಕಾರ ಫಲಾನುಭವಿಗೆ ಗುರುತಿನಚೀಟಿ ನೀಡಿದ ದಿನಾಂಕದಿಂದ 06 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

 

ನಿಯಮ 43 - ನೋಂದಾಯಿತ ನಿರ್ಮಾಣ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆಗೆ ನೀಡುವ ಸಹಾಯ ಧನ
ಮಗುವಿನ ಹೆರಿಗೆಯಾದ 06 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ನಿಯಮ 44 - ನೋಂದಾಯಿತ ನಿರ್ಮಾಣ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ಹಾಗು ಅನುಗ್ರಹ ರಾಶಿ

ಫಲಾನುಭವಿ ಮೃತನಾಗಿ 01 ವರ್ಷ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ನಿಯಮ 45 - ಶೈಕ್ಷಣಿಕ ಸಹಾಯ ಧನ ನೋಂದಾಯಿತ ನಿರ್ಮಾಣ ಕಾರ್ಮಿಕನ ಮಗ ಅಥವಾ ಮಗಳ ಶಿಕ್ಷಣಕ್ಕಾಗಿ ನೀಡುವ ಸಹಾಯಧನ

ಮುಂದಿನ ಶೈಕ್ಷಣಿಕ ವರ್ಷದ 06 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ನಿಯಮ 46 - ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ)

ಫಲಾನುಭವಿ ಆಸ್ಪತ್ರೆಗೆ ದಾಖಲಾದ ದಿನಾಂಕದಿಂದ 06 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ನಿಯಮ 47 - ಫಲಾನುಭವಿಗೆ ಅಪಘಾತದಿಂದ ಸಂಭವಿಸ ಬಹುದಾದ ಮರಣ ಅಥವಾ ಶಾಶ್ವತ / ಭಾಗಶಃ ದುರ್ಬಲತೆಗೆ ನೀಡುವ ಸಹಾಯಧನ.

ಅಪಘಾತವಾದ 01 ವರ್ಷ ಒಳಗೆ ಅರ್ಜಿಯನ್ನು ಸಲ್ಲಿಸಬೇಕು

ನಿಯಮ 48 - ನೋಂದಾಯಿತ ನಿರ್ಮಾಣ ಕಾರ್ಮಿಕನ ಹಾಗು ಅವನ / ಅವಳ ಅವಲಂಭಿತರ ಪ್ರಮುಖ ಖಾಯಿಲೆಗಳ ವೆಚ್ಚಕ್ಕಾಗಿ ನೀಡುವ ವೈಧ್ಯಕೀಯ ಸಹಾಯ ಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ)

ಫಲಾನುಭವಿಯು ಆಸ್ಪತ್ರೆಯಿಂದ ಬಿಡುಗಡೆಯಾದ 06 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು

ನಿಯಮ 49 - ನೋಂದಾಯಿತ ನಿರ್ಮಾಣ ಕಾರ್ಮಿಕನ ಮೊದಲ ಮದುವೆ ಅಥವಾ ಅವನ /ಅವಳ ಅವಲಂಭಿತರಿಗೆ ನೀಡುವ ಸಹಾಯ ಧನ

ಮದುವೆಯಾದ06 ತಿಂಗಳಒಳಗೆಅರ್ಜಿಯನ್ನುಸಲ್ಲಿಸಬೇಕು.

×
ABOUT DULT ORGANISATIONAL STRUCTURE PROJECTS